Karnataka

ಸೋಲೆಗ ಸ್ಪಾಟ್‌ಲೈಟ್ : ಸೋಲೆಗ ಹಕ್ಕಿಯ ಜಾನಪದ ಕತೆಯ ಸಂಭ್ರಮಾಚರಣೆ

ಸೋಲೆಗರ ಜೀವನ, ನಂಬಿಕೆ ಮತ್ತು ಸಂಸ್ಕೃತಿಗಳಲ್ಲಿ ಹಕ್ಕಿಗಳು ಪ್ರಮುಖ ಪಾತ್ರ ವಹಿಸುತ್ತವೆ. ಸುಗ್ಗಿಯ ಹಬ್ಬದ ಸಮಾರಂಭಗಳಲ್ಲಿ ಅವರ ಹಾಡುಗಳು ಹಾಡುಕೆ ಜೊತೆಗೆ ಕೊನೆಯಾಗುತ್ತವೆ. ಕಾಡಿನಲ್ಲಿನ ಜೀವಗಳ ಬೆಳಗಿನಿಂದ ಸಂಜೆಯವರೆಗಿನ ಹಾಡು ಇದಾಗಿದ್ದು, ಸೋಲೆಗ ದೇವರುಗಳು ಮತ್ತು ದೇವತೆಗಳನ್ನು ಒಳಗೊಂಡಿರುತ್ತದೆ. ಈ ಹಾಡುಗಳ ಮೂಲಕ ಸೋಲೆಗರು ತಮ್ಮ ಕಾಡಿನ ಮನೆಯೊಂದಿಗೆ ಹೊಂದಿರುವ ಆಳವಾದ ಸಂಪರ್ಕದ ನೋಟ ನಮಗೆ ಲಭಿಸುತ್ತದೆ. ಜೊತೆಗೆ ಅವರು ಪರಿಸರ ಕುರಿತು ಹೊಂದಿರುವ ಅಪಾರ ಜ್ಞಾನ ನಮಗೆ ತಿಳಿಯುತ್ತದೆ. ಅವರು ಹಾಡುವ ಪ್ರಾಣಿ ಪಕ್ಷಿಗಳಂತೆ ಅವರ ಭಾಷೆ ಮತ್ತು ಜೀವನದ ರೀತಿಗಳು ಕೂಡ ನಶಿಸುವ ಹಂತದಲ್ಲಿವೆ.

ಇಂಡಿಯನ್ ಮ್ಯೂಸಿಕ್ ಎಕ್ಸ್ಪೀರಿಯನ್ಸ್ ಮ್ಯೂಸಿಯಂ ನಿಮ್ಮನ್ನು ಸೋಲೆಗ ಹಕ್ಕಿಯ ಜಾನಪದ ಕಥೆಯ ಸಂಭ್ರಮಾಚರಣೆಗೆ ಆಹ್ವಾನಿಸುತ್ತಿದೆ. ಇದರಲ್ಲಿ ಬಿಳಿಗಿರಿ ರಂಗನ ಬೆಟ್ಟಗಳ ಮೂರು ಪೀಳಿಗೆಯ ಮಹಿಳೆಯರ ಪ್ರದರ್ಶನಗಳು ಮತ್ತು ಹಕ್ಕಿಗಳನ್ನು ಕುರಿತು ಸೋಲೆಗರ ಜ್ಞಾನದ ಬಗ್ಗೆ ಡಾ. ಸಮೀರಾ ಅಗ್ನಿಹೋತ್ರಿ ಅವರ ಉಪನ್ಯಾಸ ಸೇರಿರುತ್ತವೆ.

ಸೋಲಿಗ ಎಂಬ ಹೆಸರನ್ನು ಸೋಲೆಗ, ಶೊಲಗ ಮತ್ತು ಶೋಲಗ ಎಂದು ಕೂಡ ಹೇಳಲಾಗುತ್ತದೆ ಅಲ್ಲದೆ, ಇದು ಭಾರತದಲ್ಲಿನ ಒಂದು ಜನಾಂಗವಾಗಿರುತ್ತದೆ. ಇದರ ಸದಸ್ಯರು ದಕ್ಷಿಣ ಕರ್ನಾಟಕದಲ್ಲಿರುವ ಬಿಳಿಗಿರಿ ರಂಗನ ಬೆಟ್ಟ ಮತ್ತು ಸುತ್ತಮುತ್ತಲ ಬೆಟ್ಟದ ಸಾಲುಗಳಲ್ಲಿ ವಾಸಿಸುತ್ತಾರೆ. ಈ ಪ್ರದೇಶ ಬಹುತೇಕ ಚಾಮರಾಜನಗರ ಮತ್ತು ತಮಿಳುನಾಡಿನ ಈರೋಡ್ ಜಿಲ್ಲೆಗಳಲ್ಲಿರುತ್ತವೆ. ಅನೇಕರು ಹೆಚ್ಚಾಗಿ ಬಿಳಿಗಿರಿ ರಂಗನ ಬೆಟ್ಟಗಳ ಸುತ್ತಲೂ ಕರ್ನಾಟಕದ ಚಾಮರಾಜನಗರ ಜಿಲ್ಲೆಯ ಯಲಂದೂರು ಮತ್ತು ಕೊಳ್ಳೆಗಾಲ ತಾಲ್ಲೂಕುಗಳಲ್ಲಿ ವಾಸಿಸುತ್ತಾರೆ.

ಸಮೀರಾ ಅಗ್ನಿಹೋತ್ರಿ

ಸಮೀರಾ ಅವರು ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್ನಿಂದ ಪರಿಸರ ಶಾಸ್ತ್ರದಲ್ಲಿ ಪಿಎಚ್‌ಡಿ ಪಡೆದಿದ್ದು, ದಕ್ಷಿಣ ಭಾರತದ ಬಿಳಿಗಿರ ರಂಗನ ಬೆಟ್ಟಗಳಲ್ಲಿ ರಾಕೆಟ್-ಟೇಲ್ಡ್ ಡ್ರೊಂಗೋಸ್‌ಗಳನ್ನು ಕುರಿತು ಅಧ್ಯಯನ ನಡೆಸುತ್ತಿರುತ್ತಾರೆ. ೨೦೦೫ರಿಂದ ಅವರು ಇಲ್ಲಿ ವಾಸವಾಗಿರುವ ಸೋಲೆಗ ಜನರೊಂದಿಗೆ ಹತ್ತಿರದಲ್ಲಿ ಕೆಲಸ ಮಾಡಿರುತ್ತಾರೆ. ಸಮುದಾಯ ಮತ್ತು ಭಾಷಾ ತಜ್ಞರಾದ ಡಾ. ಆಂಗ್‌ಸೀ ಅವರೊಂದಿಗೆ ಸಹಭಾಗಿತ್ವದಲ್ಲಿ ಈ ಜನರ ಸಾಂಪ್ರದಾಯಿಕ ಪರಿಸರ ಶಾಸ್ತ್ರದ ಜ್ಞಾನ ದಾಖಲಿಸುವುದನ್ನು ಅವರು ಮುಂದುವರಿಸಿದ್ದಾರೆ. ಇವರು ಒಟ್ಟಾಗಿ ಸೋಲೆಗ ಭಾಷೆಯನ್ನು ಸಂರಕ್ಷಿಸಿ ಪುನರುಜ್ಜೀವನಗೊಳಿಸುವ ಮಾರ್ಗಗಳನ್ನು ಪ್ರಯತ್ನಿಸುತ್ತಿದ್ದಾರೆ. ಅವರು ಪುನರ್‌ಚಿತ್‌ನ ಸದಸ್ಯರಾಗಿದ್ದು, ಇದು ಚಾಮರಾಜನಗರದ ಗ್ರಾಮೀಣ ಯುವಜನತೆ ಮತ್ತು ರೈತರೊಂದಿಗೆ ಕೆಲಸ

Facebook Likes

Advertisements

Our Visitor

0069170
Total Visit : 69170
Total Hits : 336419