Karnataka

ಸಾಹಿತಿ ವಿ ನಾಗೇಂದ್ರ ಪ್ರಸಾದ್ ಅವರಿಗೆ ಡಾಕ್ಟರೇಟ್ ಪದವಿ ಪ್ರದಾನ (ಹಂಪಿ ಕನ್ನಡ ವಿಶ್ವವಿದ್ಯಾಲಯ)

ಸಾಹಿತಿ ವಿ ನಾಗೇಂದ್ರ ಪ್ರಸಾದ್ ಅವರಿಗೆ ಡಾಕ್ಟರೇಟ್ ಪದವಿ

 ಹಂಪಿ ಕನ್ನಡ ವಿಶ್ವವಿದ್ಯಾಲಯ

ಕನ್ನಡ ಜನಪ್ರಿಯ ಚಲನಚಿತ್ರ ಗೀತ ಸಾಹಿತಿ, ಕವಿರತ್ನ ವಿ ನಾಗೇಂದ್ರ ಪ್ರಸಾದ್ ಅವರಿಗೆ  ಹಂಪಿ ಕನ್ನಡ ವಿಶ್ವವಿದ್ಯಾಲಯ  ಡಾಕ್ಟರೇಟ್ ಪದವಿ ಪ್ರದಾನ ಮಾಡಿತು.

ಕನ್ನಡ ಚಲನಚಿತ್ರ ರಂಗದಲ್ಲಿ ಇದುವರೆಗೆ ಸರಿ ಸುಮಾರು 3  ಸಾವಿರಕ್ಕೂ ಹೆಚ್ಚು ಚಲನಚಿತ್ರ ಗೀತೆಗಳನ್ನು ರಚಿಸಿ, ಜನಮಾನಸದಲ್ಲಿ ನೆಲೆಯೂರಿರುವ ವಿ. ನಾಗೇಂದ್ರ ಪ್ರಸಾದ್ ಅವರು ಕನ್ನಡ ಸಿನಿಮಾ ರಂಗದಲ್ಲಿ ಚಿತ್ರ ಸಾಹಿತಿ, ಗಳಾಗಿ, ಸಂಭಾಷಣಕಾರ, ನಿರ್ದೇಶಕರಾಗಿದ್ದಾರೆ.

ಚಿತ್ರಗೀತೆ ರಚನೆಯಲ್ಲಿಯೇ ಸಂಶೋಧನೆ ನಡೆಸಿರುವ ವಿ. ನಾಗೇಂದ್ರ ಪ್ರಸಾದ್ ಅವರಿಗೆ  ಹಂಪಿಯ ಕನ್ನಡ ವಿಶ್ವವಿದ್ಯಾಲಯ ಲಲಿತ ಕಲಾ ನಿಕಾಯಕ್ಕೆ ಇವರು “ಕನ್ನಡ ಚಲನಚಿತ್ರ ಗೀತೆಗಳ  ಸಾಮಾಜಿಕ ಪರಿಣಾಮ: ಒಂದು ಅಧ್ಯಯನ” ಎಂಬ ವಿಷಯ ಕುರಿತು ಕಳೆದ ಐದು ವರ್ಷಗಳಿಂದ ಅಧ್ಯಯನ ನಡೆಸಿ, ವಿಶ್ವ ವಿದ್ಯಾಲಯಕ್ಕೆ ತಮ್ಮ ಡಿ. ಲಿಟ್ ಪದವಿಯ ಮಹಾ ಪ್ರಬಂಧವನ್ನು ಸಲ್ಲಿಸಿದ್ದಾರೆ

ಈ ಮಹಾಪ್ರಬಂಧವು ಪದವಿಗೆ ಮಾನ್ಯವಾಗಿ, ಇಂದು ವಿ. ನಾಗೇಂದ್ರ ಪ್ರಸಾದ್ ಅವರಿಗೆ ಡಾಕ್ಟರೇಟ್ ಪದವಿಯನ್ನು ಕನ್ನಡ ವಿಶ್ವವಿದ್ಯಾಲಯ ಹಂಪಿಯು ತನ್ನ 29ನೇ ನುಡಿಹಬ್ಬದಲ್ಲಿ ಪ್ರದಾನ ಮಾಡುತ್ತಿದೆ.

Live TV

Advertisment

Facebook Likes

Advertisements

Facebook Like

15605