Karnataka

ಶ್ರೀನಿವಾಸಚಾರಿ ನೇತೃತ್ವದ ಮಾನವ ಸಂಪನ್ಮೂಲ ವರದಿ ಅನುಷ್ಠಾನ: ವಿವಿಧ ಹಂತಗಳಲ್ಲಿ ಬೇಡಿಕೆ ಈಡೇರಿಕೆ- ಸಚಿವ ಡಾ.ಕೆ.ಸುಧಾಕರ್

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಗುತ್ತಿಗೆ – ಹೊರಗುತ್ತಿಗೆ ನೌಕರರ ಕುಂದುಕೊರತೆಗಳ ಬಗ್ಗೆ ಅಧ್ಯಯನ ಮಾಡಲು ನಿವೃತ್ತ ಐಎಎಸ್ ಅಧಿಕಾರಿ ಶ್ರೀನಿವಾಸಚಾರ್ಯ ಅಧ್ಯಕ್ಷತೆಯಲ್ಲಿ ರಚನೆಯಾದ ಮಾನವ ಸಂಪನ್ಮೂಲ ಸಮಿತಿಯ ವರದಿ ಈಗಾಗಲೇ ಸರಕಾರಕ್ಕೆ ಸಲ್ಲಿಕೆಯಾಗಿದ್ದು ಇದನ್ನು ಅನುಷ್ಠಾನಗೊಳಿಸಲು, ಇನ್ನುಳಿದ ಬೇಡಿಕೆಗಳನ್ನು ಹಂತ ಹಂತವಾಗಿ ಈಡೇರಿಸವುದಾಗಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್  ಹೇಳಿದ್ದಾರೆ.
 ಬೆಂಗಳೂರಿನಲ್ಲಿ ನಡೆದ  ರಾಜ್ಯ ಆರೋಗ್ಯ ಮತ್ತು ವೈದ್ಶಕೀಯ ಶಿಕ್ಷಣ ಇಲಾಖೆ ಗುತ್ತಿಗೆ ಹಾಗೂ ಹೊರಗುತ್ತಿಗೆ ನೌಕರರ ಸಂಘದ  ಸಮಾವೇಶ ‘ಸ್ಪಂದನೆ’ ಕಾರ್ಯಕ್ರಮದಲ್ಲಿ  ಕೊರೋನಾ ಹಿನ್ನಲೆಯಲ್ಲಿ ವಿಡಿಯೋ ಕಾನ್ಫರೆನ್ಸ್ ಮೂಲಕ ಭಾಗವಹಿಸಿ ಮಾತನಾಡಿದ ಅವರು,  ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಇಲಾಖೆ ಮತ್ತು ರಾಷ್ಟ್ರೀಯ ಆರೋಗ್ಯ ಅಭಿಯಾನದ ಗುತ್ತಿಗೆ ಮತ್ತು ಹೊರಗುತ್ತಿಗೆ ನೌಕರರು ಕೋವಿಡ್-19 ಹಿನ್ನಲೆಯಲ್ಲಿ   ಸಾಕಷ್ಟು ಶ್ರಮ ವಹಿಸಿ ಕರ್ತವ್ಯ ನಿರ್ವಹಿಸಿದ್ದು  ಶ್ಲಾಘನೀಯ. ಈ ಹಿನ್ನಲೆಯಲ್ಲಿ ಇಂತಹ ನೌಕರರು, ಸಿಬ್ಬಂದಿಗಳಿಗೆ ಆರೋಗ್ಯ ರತ್ನ ಪ್ರಶಸ್ತಿ ನೀಡಲು ಸ್ಪಂದನೆ ಎಂಬ ರಾಜ್ಯ ಮಟ್ಟದ ಸಮಾವೇಶ ಆಯೋಜಿಸಿರುವುದು ಉತ್ತಮ ಕಾರ್ಯವಾಗಿದೆ.  ಈ ಪ್ರಶಸ್ತಿಗೆ ಎಲ್ಲಾ ನೌಕರರು ಅರ್ಹರಿದ್ದಾರೆ ಸಾಂಕೇತಿಕವಾಗಿ ಕೆಲವು ನೌಕರರಿಗೆ ನೀಡುತ್ತಿರುವುದು ಉತ್ತಮ ಎಂದು ಹೇಳಿದರು.
 ಸಂಘದ ಗೌರವಾಧ್ಯಕ್ಷ ,ವಿಧಾನ ಪರಿಷತ್ ಸದಸ್ಯ ಆಯನೂರ ಮಂಜುನಾಥ್, ಸಮಾವೇಶ ಉದ್ಘಾಟಸಿ ಭಾರತೀಯ ದಿನದರ್ಶಿಕೆ ಹಾಗೂ ಡೈರಿ ಬಿಡುಗಡೆ ಮಾಡಿ ಕೊರಾನಾ ವಾರಿಯರ್ಸ್‌ಗೆ ಆರೋಗ್ಯ ರತ್ನ ಪ್ರಶಸ್ತಿ ನೀಡಿ ಮಾತನಾಡಿದ ಅವರು, ಕರೋನಾ  ವಾರಿಯರ್ಸ್ ಗಳಾಗಿ  ಹಗಲಿರುಳು  ಶ್ರಮಿಸಿ  ಕರ್ನಾಟಕದ  6 ಕೋಟಿ  ಜನರ ಸೇವೆಗೈದಿರುವ ನೌಕರರ ನ್ಯಾಯಯುತ ಬೇಡಿಕೆಗಳನ್ನು ಸರ್ಕಾರ ಕೂಡಲೇ ಈಡೇರಸಬೇಕು ಮತ್ತು ಕಾರ್ಮಿಕರ ಹಿತ ಕಾಪಾಡಲು ಅಧಿಕಾರಿಗಳು ಬದ್ಧರಾಗಿರಬೇಕು ಆಗ್ರಹಿಸಿದರು.
. ಸಮಾರಂಭದಲ್ಲಿ ಭಾರತೀಯ ಮಜ್ದೂರ್‌ ಸಂಘದ ಹಿರಿಯ ಮುಖಂಡರಾದ . ಡಿ. ಕೆ. ಸದಾಶಿವ. ಕೆ. ಎಮ್. ಸೂರ್ಯನಾರಾಯಣ ರಾವ್‌,  ಬಾಲಕೃಷ್ಣ ದೇಶ ಪಾಂಡೆ, ರಾಜ್ಯ ಉಪಾಧ್ಯಕ್ಷರಾದ  ನೀಲಕಂಠ ರೆಡ್ಡಿ, ರಾಜ್ಯ ಪ್ರಧಾನ ಕಾರ್ಯದರ್ಶಿ. ಪ್ರಕಾಶ್‌ ಮತ್ತು ಬಿ.ಎಮ್.ಎಸ್‌ ಬೆಂಗಳೂರಿನ ಅಧ್ಯಕ್ಷ ವೆಂಕಟೇಶ್‌
 ಮಾರ್ಗದರ್ಶನ ನೀಡಿದರು. ಅದಲ್ಲದೆ ಕರ್ನಾಟಕ ರಾಜ್ಯ ಆರೋಗ್ಯ ಮತ್ತು ವೈ. ಶಿಕ್ಷಣ ಇಲಾಖೆ ಗುತ್ತಿಗೆ ಹಾಗೂ ಹೊರಗುತ್ತಿಗೆ ನೌಕರರ ಸಂಘ  ದ ರಾಜ್ಯಾಧ್ಯಕ್ಷರಾದ ವಿಶ್ವರಾಧ್ಯ. ಎಚ್. ಯಾಮೋಜಿ, . ರಾಜ್ಯ ಮಾದ್ಯಮ ಕಾರ್ಯದರ್ಶಿ ಗಿರೀಶ್. ಕೆ, ರಾಜ್ಯ ಕಾರ್ಯದರ್ಶಿ ಶೇಖರ್‌ ದತ್ತುರ್ಗಿ, ಅಂಜಲಿ ಹಾಗೂ ರುದ್ರೇಶ್‌ ಹಾಗೂ ಸಂಘದ ರಾಜ್ಯ ಮಟ್ಟದ ಪ್ರಮುಖ ಪದಾಧಿಕಾರಿಗಳಾದ . ಗವಿ ಸಿದ್ದಪ್ಪ ಮಂಜುನಾಥ್‌, ಡಾ. ಸಂಜೀವ್‌ ಬಾವ್ ಚಿ, ಹಾಲಸ್ವಾಮಿ, ಹಮೀದ್‌, ಎಮ್.ಎಫ್‌. ಹಣಗಿ, ಶ್ರೀನಿವಾಸ್ ಸಂಘದ ಪ್ರಧಾನ ಕಾರ್ಯದರ್ಶಿಶ್ರೀಕಾಂತ್ ಸ್ವಾಮಿ ಸಮಾವೇಶದಲ್ಲಿ ಹಾಜರಿದ್ದರು

Live TV

Advertisment

Facebook Likes

Advertisements

Facebook Like

15604