ಒಂದು ಗಂಟೆಯ ಕತೆ” ಎಂಬ ಕನ್ನಡ ಚಲನಚಿತ್ರ ಬಿಡುಗಡೆಯಾಗಿ ಪ್ರದರ್ಶನಗೊಳ್ಳುತ್ತಿದೆ. ಇದೊಂದು ಸದಭಿರುಚಿಯ ಚಿತ್ರವಾಗಿದೆ. ಈಗಿನ್ನೂ ಚಿತ್ರ ಜನರನ್ನು ತಲುಪುತ್ತದೆ. ಇದು ಈ ಚಿತ್ರವನ್ನು ಚಿತ್ರಮಂದಿರದಿಂದ ತೆಗೆದು ಹಾಕುವ ಹುನ್ನಾರ ನಡೆದಿದೆ ಎಂದು ಶ್ರೀ ಭುವನೇಶ್ವರಿ ಮಹಿಳೆಯರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷೆ ಎಂ. ಉಷಾ ಅಸಮಾಧಾನ ವ್ಯಕ್ತಪಡಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಒಂದು ಗಂಟೆಯ ಕತೆ ಚಿತ್ರವು ಜನರನ್ನು ತಲುಪಬೇಕು . ಈ ಚಿತ್ರದಲ್ಲಿ ಹೆಣ್ಣು ಮಕ್ಕಳೇ ಪ್ರಧಾನವಾಗಿದ್ದು, ಯಾವುದೇ ಕಾರಣಕ್ಕೂ ಚಿತ್ರವನ್ನು ತೆಗೆಯಬಾರದು, ಒಂದು ವೇಳೆ ಚಿತ್ರವನ್ನು ಚಿತ್ರಮಂದಿರಗಳಿಂದ ತೆಗೆದದ್ದೇ ಆದಲ್ಲಿ ಹೋರಾಟ ರೂಪಿಸಬೇಕಾಗುತ್ತಗುತ್ತದೆ ಎಂದು ಎಂದು ಉಷಾ ತಿಳಿಸಿದ್ದಾರೆ.
ಇತ್ತೀಚೆಗೆ ಜಾಹೀರಾತು, ಚಲನಚಿತ್ರಗಳು, ಸೀರಿಯಲ್ಗಳಲಿ ಮಹಿಳೆಯನ್ನು ಭೋಗದ ವಸ್ತುವಿನಂತೆ ವೈಭವೀಕರಿಸಲಾಗುತ್ತಿದೆ ಇದು ತಪ್ಪಬೇಕು . ಮಹಿಳೆಯರು ಪ್ರಧಾನವಾಗಿ ರುವಂತಹ ಚಿತ್ರಗಳಿಗೆ ಹೆಚ್ಚು ಅವಕಾಶ ನೀಡಬೇಕು ಎಲ್ಲಾ ಮಹಿಳೆಯರು ಚಿತ್ರಮಂದಿರಕ್ಕೆ ಬಂದು ಚಿತ್ರ ನೋಡಬೇಕು ಎಂದು ಶ್ರೀ ಭುವನೇಶ್ವರಿ ಮಹಿಳೆಯರ ಕ್ಷೇಮಾಭಿವೃದ್ಧಿ ಸಂಘ ಹಾಗೂ ಕರ್ನಾಟಕ ವಿಶ್ವ ಮಾನವ ಸೇನೆ ಅಧ್ಯಕ್ಷರು , ಪದಾಧಿಕಾರಿಗಳು ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಮಹಿಳೆಯನ್ನೇ ವ್ಯಾಪಾರ ವಸ್ತು ಎಂದು ಬಿಂಭಿಸುವುದು ಸರಿಯಲ್ಲ. ಹೆಣ್ಣನ್ನು ಭೋಗದ ವಸ್ತುವಂತೆ ವೈಭವೀಕರಿಸಲಾಗುತ್ತಿದೆ ಇದನ್ನು ಖಂಡಿಸುವುದಾಗಿ ಪದಾಧಿಕಾರಿಗಳು ಹೇಳಿದ್ದಾರೆ.

Add Comment